ರಾಜ್ಯದಲ್ಲಿ ಅಕ್ಷರಶಃ ರಾಜಕೀಯ ಹಾಗೂ ಹೋರಾಟದ ಕಾವು ರಂಗೇರಿದೆ. “ಅಲ್ಲ, ಏನ್ ಆಗ್ತಿದೆ ನಮ್ಮ ರಾಜ್ಯದಲ್ಲಿ?” ಅನ್ನೋ ಪ್ರಶ್ನೆ ಈಗ ಪ್ರತಿಯೊಬ್ಬ ಕನ್ನಡಿಗನಲ್ಲೂ ಮೂಡಿದೆ. ರಾಜ್ಯದಲ್ಲಿ KPSC ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ ಒಂದು ಕಡೆಯಾದರೆ, ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ರೈತರು ಮುಗಿಬಿದ್ದಿದ್ದಾರೆ.
ಸರ್ಕಾರಕ್ಕೆ ಇವರ ಕಷ್ಟ ಕೇಳಿಸ್ತಿಲ್ವಾ? ಎನ್ನುವ ಪ್ರಶ್ನೆಯೊಂದಿಗೆ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಬಿಡದಿಯಿಂದ ಬೆಂಗಳೂರಿಗೆ ಬೃಹತ್ ಕಾಲ್ನಡಿಗೆ ಹೋರಾಟ ಆರಂಭವಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಟೌನ್ ಶಿಪ್ ಯೋಜನೆ ಮುಂದುವರಿಯಲಿದ್ದು, ಪ್ರತಿ ಎಕರೆಗೆ ₹3 ಕೋಟಿಗೂ ಹೆಚ್ಚು ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ಆದರೆ 20 ವರ್ಷಗಳ ಹಿಂದಿನ ಯೋಜನೆಯನ್ನು ಈಗ ಮತ್ತೆ ಕೆಣಕಿರುವುದು ವಿರೋಧಕ್ಕೆ ಕಾರಣವಾಗಿದೆ.
ಇನ್ನು ಈ ಹೋರಾಟದ ವಿಚಾರದಲ್ಲಿ ಬಿಜೆಪಿಯಲ್ಲಿ ಒಮ್ಮತವಿಲ್ಲದಿರುವುದು ಒಂದೆಡೆಯಾದರೆ, ಶಾಸಕ ಬಾಲಕೃಷ್ಣ ಇದನ್ನು ‘ಪ್ರಾಯಶ್ಚಿತ್ತ ಯಾತ್ರೆ’ ಎಂದು ವ್ಯಂಗ್ಯವಾಡಿದ್ದಾರೆ. ರೈತರ ಕಷ್ಟ ಆಲಿಸಲು ಸರ್ಕಾರದ ನಾಯಕರು ಬಾರದ ಕಾರಣ, ಅನಿವಾರ್ಯವಾಗಿ ರೈತರೇ ಬೆಂಗಳೂರಿಗೆ ಧಾವಿಸುತ್ತಿದ್ದಾರೆ.
ಒಟ್ಟಾರೆಯಾಗಿ, ಅನ್ನದಾತರ ಮತ್ತು ವಿದ್ಯಾರ್ಥಿಗಳ ಆಕ್ರೋಶಕ್ಕೆ ಈ ಸರ್ಕಾರವಾದರೂ ಸ್ಪಂದಿಸಿ ನ್ಯಾಯ ಒದಗಿಸುತ್ತಾ? ಅಥವಾ ರಾಜಕೀಯ ತಿಕ್ಕಾಟದಲ್ಲಿ ಜನರ ಬದುಕು ಬಲವಾಗುತ್ತಾ? ಕಾದು ನೋಡಬೇಕು







