• ಮುಖಪುಟ
  • ನಮ್ಮ ಬಗ್ಗೆ
  • ಅಭಿಪ್ರಾಯ
  • ಆಫ್ ದಿ ರೆಕಾರ್ಡ್
  • ಇದು ಮ್ಯಾಟರ್
  • ವಿಶ್ಲೇಷಣೆ
  • ಸಂಪಾದಕರ ಆಯ್ಕೆ
  • ಸಾಹಿತ್ಯ
  • ಸಂಪರ್ಕಿಸಿ
Chinthana Prabha Media House
No Result
View All Result
SUBSCRIBE
  • ಇಷ್ಟೇ ಸುದ್ದಿ
  • ಕರ್ನಾಟಕ
  • ಜಿಲ್ಲಾ ಸುದ್ದಿಗಳು
  • ದೇಶ
  • ವಿದೇಶ
  • ರಾಜಕೀಯ
  • ಮನರಂಜನೆ
  • ವಾಣಿಜ್ಯ
  • ಕ್ರೀಡೆ
  • ಕ್ರೈಮ್
  • ಧಾರ್ಮಿಕ
  • ಆಹಾರ-ಆರೋಗ್ಯ
  • ಉದ್ಯೋಗ-ಶಿಕ್ಷಣ
  • ತಂತ್ರಜ್ಙಾನ
  • ಅಂಕಣಗಳು
  • ವೈರಲ್ ವಾಸ್ತವ
  • ಇಷ್ಟೇ ಸುದ್ದಿ
  • ಕರ್ನಾಟಕ
  • ಜಿಲ್ಲಾ ಸುದ್ದಿಗಳು
  • ದೇಶ
  • ವಿದೇಶ
  • ರಾಜಕೀಯ
  • ಮನರಂಜನೆ
  • ವಾಣಿಜ್ಯ
  • ಕ್ರೀಡೆ
  • ಕ್ರೈಮ್
  • ಧಾರ್ಮಿಕ
  • ಆಹಾರ-ಆರೋಗ್ಯ
  • ಉದ್ಯೋಗ-ಶಿಕ್ಷಣ
  • ತಂತ್ರಜ್ಙಾನ
  • ಅಂಕಣಗಳು
  • ವೈರಲ್ ವಾಸ್ತವ
No Result
View All Result
Chinthana Prabha Media House
No Result
View All Result
Home ಇದು ಮ್ಯಾಟರ್

ಜಂತರ್ ಮಂತರ್ ಅಧಿಕೃತ ಪ್ರತಿಭಟನಾ ಸ್ಥಳವಲ್ಲ

site author by site author
October 12, 2026
0 0
ಜಂತರ್ ಮಂತರ್ ಅಧಿಕೃತ ಪ್ರತಿಭಟನಾ ಸ್ಥಳವಲ್ಲ
Share on FacebookShare on Twitter
Buy JNews
ADVERTISEMENT

ನವದೆಹಲಿ: ಪ್ರತಿಭಟನೆಗಾಗಿ ದೆಹಲಿಯಲ್ಲಿ ಮೂರು ಹೊಸ ಸ್ಥಳಗಳನ್ನು ನಿಗದಿ ಪಡಿಸಲಾಗಿದೆ. ಈ ಮೂಲಕ ಕೇಂದ್ರ ಗೃಹ ಸಚಿವಾಲಯ 2022ರ ಏಪ್ರಿಲ್ 28ರ ಮೊದಲು ನೀಡಿದ ಆದೇಶವನ್ನು ಭಾಗಶಃ ಬದಲಾಯಿಸಿದೆ. ಹೊಸ ಆದೇಶದ ಮೂಲಕ ಹೊರಡಿಸಲಾದ ಪರಿಷ್ಕೃತ ಮಾರ್ಗಸೂಚಿಗಳಡಿಯಲ್ಲಿ ಜಂತರ್ ಮಂತರ್ ಇನ್ನು ಮುಂದೆ ದೆಹಲಿಯಲ್ಲಿ ಪ್ರತಿಭಟನೆಗೆ ನಿಗದಿತ ಸ್ಥಳವಾಗಿರುವುದಿಲ್ಲ. ಹೊಸದಾಗಿ ನಿಗದಿಪಡಿಸಲಾದ ಮೂರು ಸ್ಥಳಗಳಲ್ಲಿ ಪ್ರತಿಭಟನೆಗಳನ್ನು ಆಯೋಜಿಸಲು ವಿವರವಾದ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಹೊರಡಿಸಲಾಗುವುದು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಚುನಾವಣಾ ಅಕ್ರಮ ಮತ್ತು ಎಸ್‌ಐಆರ್ ಪ್ರಕ್ರಿಯೆಯ ವಿರುದ್ಧ ವಿರೋಧ ಪಕ್ಷಗಳು ತಮ್ಮ ಅಭಿಯಾನವನ್ನು ತೀವ್ರಗೊಳಿಸುತ್ತಿರುವ ಮಧ್ಯೆಯೇ ಕೇಂದ್ರ ಸರ್ಕಾರದ ಗೃಹ ಸಚಿವಾಲಯವು ಹೊಸ ಮೂರು ಪ್ರತಿಭಟನಾ ಸ್ಥಳಗಳನ್ನು ನಿಗದಿಪಡಿಸಿದೆ. ದೆಹಲಿ ಪೊಲೀಸ್‌ನ ಸ್ಥಾಯಿ ಆದೇಶ ಸಂಖ್ಯೆ L&O/48/2026 ರ ಅಡಿಯಲ್ಲಿ ಇನ್ನು ಮುಂದೆ ರಾಮ್‌ಲೀಲಾ ಮೈದಾನ, ಬುರಾರಿ ಮೈದಾನ ಮತ್ತು ಪೂರ್ವ ದೆಹಲಿಯ ಸಿಬಿಡಿ ಮೈದಾನವನ್ನು ಪ್ರತಿಭಟನಾ ಸ್ಥಳಗಳಾಗಿ ನಿಗದಿಪಡಿಸಲಾಗಿದೆ. ಇದು ಇನ್ನು ಮುಂದೆ ದೆಹಲಿಯ ಪ್ರತಿಭಟನಾ ವ್ಯವಸ್ಥೆಯಲ್ಲಿನ ಬದಲಾವಣೆಯನ್ನು ಸೂಚಿಸುತ್ತದೆ. ಈ ಪರಿಷ್ಕೃತ ಆದೇಶದ ಅಡಿಯಲ್ಲಿ ಜಂತರ್ ಮಂತರ್ ಅನ್ನು ಇನ್ನು ಮುಂದೆ ಅಧಿಕೃತ ಪ್ರತಿಭಟನಾ ಸ್ಥಳವಾಗಿ ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ.

ಜಂತರ್ ಮಂತರ್ ದೀರ್ಘಕಾಲದಿಂದ ವಿವಿಧ ರಾಜಕೀಯ ಪಕ್ಷಗಳು, ನಾಗರಿಕ ಸಮಾಜದ ಗುಂಪುಗಳು, ಕಾರ್ಯಕರ್ತರು ಮತ್ತು ಇತರ ಸಂಘಟನೆಗಳಿಗೆ ಪ್ರಮುಖ ಪ್ರತಿಭಟನಾ ಸ್ಥಳವಾಗಿ ಗುರುತಿಸಿಕೊಂಡಿತ್ತು. ಹೊಸ ಆದೇಶದ ಪ್ರಕಾರ ಮಾರ್ಗಸೂಚಿಗಳಲ್ಲಿ ಭಾಗಶಃ ಬದಲಾವಣೆ ಮಾಡಲಾಗಿದೆ.

ಪ್ರತಿಭಟನೆಗೆ ಗುರುತಿಸಲಾಗಿರುವ ಮೂರು ಸ್ಥಳಗಳಲ್ಲಿ ರಾಮ್‌ಲೀಲಾ ಮೈದಾನವು ಮಧ್ಯ ದೆಹಲಿಯ ಒಂದು ಪ್ರಮುಖ ಮೈದಾನವಾಗಿದೆ. ಇಲ್ಲಿ ಬೃಹತ್ ರಾಜಕೀಯ ರಾಲಿಗಳು ಮತ್ತು ಸಾರ್ವಜನಿಕ ಪ್ರತಿಭಟನೆಗಳು ನಡೆದಿವೆ.

ಬುರಾರಿ ಮೈದಾನವು ಉತ್ತರ ದೆಹಲಿಯಲ್ಲಿ ನಿಗದಿಪಡಿಸಲಾದ ಒಂದು ಸ್ಥಳವಾಗಿದೆ. ಸಿಬಿಡಿ ಮೈದಾನವು ಪೂರ್ವ ದೆಹಲಿಯಲ್ಲಿ ಪ್ರತಿಭಟನೆಗಾಗಿ ಗುರುತಿಸಲಾದ ಸ್ಥಳವಾಗಿದೆ.

ಚುನಾವಣಾ ಆಯೋಗ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಸಂಬಂಧಿಸಿ ಕಾಕ್ರೋಚ್ ಜನತಾ ಪಕ್ಷವು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಕಾಕ್ರೋಚ್ ಜನತಾ ಪಾರ್ಟಿ ಅನುಮತಿ ಕೋರಿತ್ತು. ಇದಕ್ಕಾಗಿ ಸೋಮವಾರ ಸಂಸತ್ ಭವನದ ರಸ್ತೆಯಲ್ಲಿರುವ ಪೊಲೀಸ್ ಠಾಣೆಯನ್ನು ಸಂಪರ್ಕಿಸಲಾಯಿತು. ಆದರೆ ನಿಗದಿತ ಸಮಯದೊಳಗೆ ಅರ್ಜಿ ಸಲ್ಲಿಸದಿರುವುದನ್ನು ಕಾರಣವಾಗಿ ನೀಡಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.

ಒಂದು ಕಡೆ ಇಂಡಿಯಾ ಒಕ್ಕೂಟ, ಇನ್ನೊಂದು ಕಡೆ ಸಿಜೆಪಿ ಹೋರಾಟ ನಡೆಯುತ್ತಿರುವುದರಿಂದ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆಗಳು ಮತ್ತು ಸಾರ್ವಜನಿಕ ಸ್ಥಳಗಳ ಬಳಕೆಯ ಕುರಿತಾಗಿ ಹೊಸ ಚರ್ಚೆಗಳು ಪ್ರಾರಂಭವಾಗಿವೆ. ಈಗಾಗಲೇ ಸುಪ್ರೀಂ ಕೋರ್ಟ್ ಪ್ರತಿಭಟನಾಕಾರರಿಗೆ ಉತ್ತಮ ಸೌಲಭ್ಯಗಳಿರುವ ಪರ್ಯಾಯ ಸ್ಥಳವನ್ನು ಗುರುತಿಸುವಂತೆ ಕೇಂದ್ರಕ್ಕೆ ಸೂಚಿಸಿತ್ತು.

Tags: #chinthanaprabha#protest
site author

site author

Related Posts

ದೊಡ್ಲ ಡೇರಿಯ ಫುಲ್ ಕ್ರೀಮ್ ಹಾಲಿನಲ್ಲಿ ಡಿಟರ್ಜೆಂಟ್, ಕಾಸ್ಟಿಕ್ ಸೋಡಾ ಪತ್ತೆ
ಆಹಾರ-ಆರೋಗ್ಯ

ದೊಡ್ಲ ಡೇರಿಯ ಫುಲ್ ಕ್ರೀಮ್ ಹಾಲಿನಲ್ಲಿ ಡಿಟರ್ಜೆಂಟ್, ಕಾಸ್ಟಿಕ್ ಸೋಡಾ ಪತ್ತೆ

October 17, 2026
ಅ. 22ರವರೆಗೆ ಭಾರೀ ಮಳೆ ಮುನ್ಸೂಚನೆ: ಬೆಂಗಳೂರು ಸೇರಿ 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌!
ಆಹಾರ-ಆರೋಗ್ಯ

ಅ. 22ರವರೆಗೆ ಭಾರೀ ಮಳೆ ಮುನ್ಸೂಚನೆ: ಬೆಂಗಳೂರು ಸೇರಿ 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌!

October 17, 2026
ರಾಜ್ಯಾದ್ಯಂತ ಸ್ವೀಟ್ಸ್ ಶಾಪ್‌ಗಳ ಮೇಲೆ ಅಟ್ಯಾಕ್‌ : 15 ಸ್ವೀಟ್ಸ್ ತಯಾರಿಕಾ ಘಟಕಗಳಿಗೆ ನೋಟಿಸ್
ಆಹಾರ-ಆರೋಗ್ಯ

ರಾಜ್ಯಾದ್ಯಂತ ಸ್ವೀಟ್ಸ್ ಶಾಪ್‌ಗಳ ಮೇಲೆ ಅಟ್ಯಾಕ್‌ : 15 ಸ್ವೀಟ್ಸ್ ತಯಾರಿಕಾ ಘಟಕಗಳಿಗೆ ನೋಟಿಸ್

October 17, 2026

Recommended Stories

ಸೌಜನ್ಯ ಕೇಸ್‌ಗೆ ಮರು ತನಿಖೆಗೆ ಚೂಡಿದಾರ ಟಾಪ್‌ ಸಾಕ್ಷಿಯಾಗುತ್ತಾ? M.O.15ರ DNA ಸಾಕ್ಷ್ಯಕ್ಕೆ ಮತ್ತೆ ಮಹತ್ವ

ಸೌಜನ್ಯ ಕೇಸ್‌ಗೆ ಮರು ತನಿಖೆಗೆ ಚೂಡಿದಾರ ಟಾಪ್‌ ಸಾಕ್ಷಿಯಾಗುತ್ತಾ? M.O.15ರ DNA ಸಾಕ್ಷ್ಯಕ್ಕೆ ಮತ್ತೆ ಮಹತ್ವ

September 24, 2026
ಬೆಂಗಳೂರಿನಲ್ಲಿ ದಾಖಲೆಯ ಟ್ರಾಫಿಕ್ ಜಾಮ್‌ : 6 ಗಂಟೆ ರಸ್ತೆಯಲ್ಲೇ ಸಿಲುಕಿದ ಪ್ರಯಾಣಿಕರು!

ಬೆಂಗಳೂರಿನಲ್ಲಿ ದಾಖಲೆಯ ಟ್ರಾಫಿಕ್ ಜಾಮ್‌ : 6 ಗಂಟೆ ರಸ್ತೆಯಲ್ಲೇ ಸಿಲುಕಿದ ಪ್ರಯಾಣಿಕರು!

October 17, 2026
ಕ್ಯಾಂಟರ್‌ ಡಿಕ್ಕಿಯಾಗಿ ಧರೆಗುರುಳಿದ ಮರ – ತಪ್ಪಿದ ಭಾರೀ ಅನಾಹುತ

ಕ್ಯಾಂಟರ್‌ ಡಿಕ್ಕಿಯಾಗಿ ಧರೆಗುರುಳಿದ ಮರ – ತಪ್ಪಿದ ಭಾರೀ ಅನಾಹುತ

October 9, 2026

Popular Stories

  • ಬೆಂಗಳೂರು ಸೇರಿದಂತೆ ಹಲವೆಡೆ ಇಂದು ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

    ಬೆಂಗಳೂರು ಸೇರಿದಂತೆ ಹಲವೆಡೆ ಇಂದು ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

    0 shares
    Share 0 Tweet 0
  • ಚಿನ್ನದ ಬೆಲೆ ಭಾರಿ ಇಳಿಕೆ : ಇಂದಿನ ದರ ಎಷ್ಟಿದೆ ಚೆಕ್‌ ಮಾಡಿ

    0 shares
    Share 0 Tweet 0
  • ಯಶ್-ಕಿಯಾರಾ ಬೋಲ್ಡ್ ಸದ್ದು! ಕಿಯಾರಾ ಬೆಂಬಲಿಸಿದ ಸಿದ್ಧಾರ್ಥ್!

    0 shares
    Share 0 Tweet 0
  • ಅಯ್ಯಪ್ಪನ ಚಿನ್ನದ ಕಿರೀಟ ನಾಪತ್ತೆ: ಅಸಲಿ ಜಾಗದಲ್ಲಿ ನಕಲಿ ಪತ್ತೆ!

    0 shares
    Share 0 Tweet 0
  • ವಾಹನ ಮಾಲೀಕರೇ ಇಲ್ಲಿ ಕೇಳಿ : ಸೆ.25ರೊಳಗೆ ಈ ಕೆಲಸ ಮಾಡದಿದ್ದರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದು!

Facebook Instagram X-twitter Youtube Whatsapp

ಕ್ವಿಕ್ ಲಿಂಕ್ಸ್

  • ಮುಖಪುಟ
  • ನಮ್ಮ ಬಗ್ಗೆ
  • ಅಭಿಪ್ರಾಯ
  • ಆಫ್ ದಿ ರೆಕಾರ್ಡ್
  • ಇದು ಮ್ಯಾಟರ್
  • ವಿಶ್ಲೇಷಣೆ
  • ಸಂಪಾದಕರ ಆಯ್ಕೆ
  • ಸಾಹಿತ್ಯ
  • ಸಂಪರ್ಕಿಸಿ
  • ಮುಖಪುಟ
  • ನಮ್ಮ ಬಗ್ಗೆ
  • ಅಭಿಪ್ರಾಯ
  • ಆಫ್ ದಿ ರೆಕಾರ್ಡ್
  • ಇದು ಮ್ಯಾಟರ್
  • ವಿಶ್ಲೇಷಣೆ
  • ಸಂಪಾದಕರ ಆಯ್ಕೆ
  • ಸಾಹಿತ್ಯ
  • ಸಂಪರ್ಕಿಸಿ
  • ಇಷ್ಟೇ ಸುದ್ದಿ
  • ಕರ್ನಾಟಕ
  • ಜಿಲ್ಲಾ ಸುದ್ದಿಗಳು
  • ದೇಶ
  • ವಿದೇಶ
  • ರಾಜಕೀಯ
  • ಮನರಂಜನೆ
  • ವಾಣಿಜ್ಯ
  • ಇಷ್ಟೇ ಸುದ್ದಿ
  • ಕರ್ನಾಟಕ
  • ಜಿಲ್ಲಾ ಸುದ್ದಿಗಳು
  • ದೇಶ
  • ವಿದೇಶ
  • ರಾಜಕೀಯ
  • ಮನರಂಜನೆ
  • ವಾಣಿಜ್ಯ
  • ಹೋಂ
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • ವೃತ್ತಿಜೀವನ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಹೋಂ
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • ವೃತ್ತಿಜೀವನ
  • ನಮ್ಮೊಂದಿಗೆ ಜಾಹೀರಾತು ನೀಡಿ
  • About
  • Terms & Conditions
  • Privacy Policy
  • Disclaimer
  • Newsletter
  • Advertise With Us
  • Career
  • Contact
  • About
  • Terms & Conditions
  • Privacy Policy
  • Disclaimer
  • Newsletter
  • Advertise With Us
  • Career
  • Contact
©2026 Cinthana Prabha. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • ಇಷ್ಟೇ ಸುದ್ದಿ
  • ಕರ್ನಾಟಕ
  • ಜಿಲ್ಲಾ ಸುದ್ದಿಗಳು
  • ದೇಶ
  • ವಿದೇಶ
  • ರಾಜಕೀಯ
  • ಮನರಂಜನೆ
  • ವಾಣಿಜ್ಯ
  • ಕ್ರೀಡೆ
  • ಕ್ರೈಮ್
  • ಧಾರ್ಮಿಕ
  • ಆಹಾರ-ಆರೋಗ್ಯ
  • ಉದ್ಯೋಗ-ಶಿಕ್ಷಣ
  • ತಂತ್ರಜ್ಙಾನ
  • ಅಂಕಣಗಳು
  • ವೈರಲ್ ವಾಸ್ತವ

©2026 Chinthana Prabha. All Rights Reserved.