ಚಾಮರಾಜನಗರ: ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯ ಚಾಮರಾಜನಗರ ಗಡಿಭಾಗ ತಮಿಳುನಾಡಿನ ಆಸನೂರು ಬಳಿ ಭೀಕರ ಘಟನೆಯೊಂದು ನಡೆದಿದೆ. ಮೈಸೂರಿನಿಂದ ಕೊಯಮತ್ತೂರಿಗೆ ತೆರಳುತ್ತಿದ್ದ ಕಾರನ್ನು ತಡೆದ ಕಾಡಾನೆಯೊಂದು, ಆಹಾರದ ಆಸೆಗೆ ಏಕಾಏಕಿ ಕಾರಿನ ಮೇಲೆ ಕಾಲಿಟ್ಟು ಹುಡುಕಾಟ ನಡೆಸಿದೆ.
ಆನೆ ಕಾರಿನ ಮೇಲೆ ಕಾಲಿಡುತ್ತಿದ್ದಂತೆಯೇ ಸೈಡ್ ಮಿರರ್ ಸಂಪೂರ್ಣ ಜಖಂಗೊಂಡಿದೆ. ದಿಢೀರ್ ನಡೆದ ಈ ಗಜರಾಜನ ರೌದ್ರಾವತಾರದಿಂದ ಕಾರಿನಲ್ಲಿದ್ದ ಪ್ರಯಾಣಿಕರು ಹಾಗೂ ಇತರ ವಾಹನ ಸವಾರರು ತೀವ್ರ ಆತಂಕದಿಂದ ಪತರಗುಟ್ಟಿದ್ದಾರೆ. ಅದೃಷ್ಟವಶಾತ್ ಚಾಲಕನ ಸಮಯಪ್ರಜ್ಞೆಯಿಂದ ಕಾರಿನಲ್ಲಿದ್ದ ಪ್ರಯಾಣಿಕರು ಯಾವುದೇ ಅನಾಹುತವಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ‘ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ’; ಯಶಸ್ ವಿರುದ್ಧ ಮಂಜ ಮಾತು







