ಕಳೆದ ಕೆಲ ವಾರದಿಂದ ಬರೀ ಜಗಳ ನಡೆಯುತ್ತಿದ್ದ ಬಿಗ್ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ ನಗು ತುಂಬಿದೆ. ದಸರಾ ಹಬ್ಬದ ಸಂಭ್ರಮಕ್ಕೆ ಗೆಸ್ಟ್ಗಳಾಗಿ ಬಿಗ್ಬಾಸ್ ಇದೀಗ ಇಬ್ಬರು ವೈಲ್ಡ್ಕಾರ್ಡ್ ಸ್ಪರ್ಧಿಗಳನ್ನು ಮನೆಯೊಳಗೆ ಕಳುಹಿಸಿದ್ದಾರೆ.
ದಸರಾ ಹಬ್ಬದ ಸಂಭ್ರಮಕ್ಕೆ ಬಿಗ್ಬಾಸ್ ಮನೆಯಲ್ಲಿ ಪಾಸಿಟಿವ್ ಎನರ್ಜಿ ತುಂಬಲಿ ಎಂಬ ಉದ್ದೇಶದೊಂದಿಗೆ ಹಾಗೂ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಕಳೆಕಟ್ಟಲು ಮನೆಗೆ ಕುಮಾರಿ ಮತ್ತು ಲಕ್ಷ್ಮೀ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.
ಬಿಗ್ಬಾಸ್ ಆರಂಭಕ್ಕೂ ಮುನ್ನ ನಡೆದ ಅಗ್ನಿಪರೀಕ್ಷೆಯಲ್ಲಿ ಈ ಇಬ್ಬರು ಸ್ಪರ್ಧಿಗಳು ಭಾಗಿಯಾಗಿದ್ದರು. ಮಂಜು ಹಾಗೂ ಸಂಗೀತಾ ಭಟ್ ಬದಲಾಗಿ ಬಿಗ್ಬಾಸ್ ಇಬ್ಬರನ್ನು ಮನೆಯೊಳಗೆ ಕಳುಹಿಸಿದ್ದಾರೆ. ವೈಲ್ಡ್ಕಾರ್ಡ್ ಸ್ಪರ್ಧಿಗಳು ಎಂಟ್ರಕೊಟ್ಟಿರುವ ಪ್ರೋಮೋವೊಂದನ್ನು ವಾಹಿನಿ ಹಂಚಿಕೊಂಡಿದೆ.





