ಬಿಗ್ಬಾಸ್ ರೋಚಕ ಟ್ವಿಸ್ಟ್ ಪಡೆದು ಸಾಗುತ್ತಿದೆ. ಅದರಲ್ಲೂ ಈಗ ತಾಂಡವ್ ರಾಮ್ ಔಟ್ ಆಗಿದ್ದಾರೆ. ಇದು ಅನ್ಫೇರ್ ಎಂದು ವೀಕ್ಷಕರು ಕಮೆಂಟ್ ಮಾಡುತ್ತಿದ್ದಾರೆ. ಈಗ ಹೊಸ ಪ್ರೋಮೋ ಔಟ್ ಆಗಿದ್ದು, ಮತ್ತಿಬ್ಬರು ಹೊರ ಹೋಗೋದು ಕನ್ಫರ್ಮ್ ಆಗಿದೆ.
3 ಗಂಟೆಗಳ ಕಾಲ ಸುದೀರ್ಘವಾಗಿ ಪ್ರಸಾರ
ರಿಯಾಲಿಟಿ ಶೋ ‘ಬಿಗ್ ಬಾಸ್’ ಶನಿವಾರ ಮತ್ತು ಭಾನುವಾರದ ಸಂಚಿಕೆಯಲ್ಲಿ ಪ್ರೇಕ್ಷಕರಿಗೆ ‘ಡಬಲ್ ಧಮಾಕಾ’ ರಸದೌತಣ ನೀಡಲು ಸಜ್ಜಾಗಿದೆ. ಕಿಚ್ಚ ಸುದೀಪ್ ನಡೆಸಿಕೊಡುವ ‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮವು ಈ ಬಾರಿ ಸತತ 3 ಗಂಟೆಗಳ ಕಾಲ ಸುದೀರ್ಘವಾಗಿ ಪ್ರಸಾರವಾಗಲಿದೆ.
ಮನೆಗೆ ಮತ್ತೊಂದು ‘ಎಮರ್ಜೆನ್ಸಿ ಎಕ್ಸಿಟ್’ ಎದುರಾಗಿದ್ದು, ಮತ್ತಿಬ್ಬರು ಸ್ಪರ್ಧಿಗಳು ಹೊರಹೋಗುವ ಸೂಚನೆ ಸಿಕ್ಕಿದೆ. ವೋಟಿಂಗ್ ಆಧಾರದ ಮೇಲೆ ಸ್ಪರ್ಧಿಗಳ ಭವಿಷ್ಯ ನಿರ್ಧಾರವಾಗಲಿದೆ. ಈ ರೋಚಕ ಸಂಚಿಕೆಯನ್ನು ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಕಲರ್ಸ್ ಕನ್ನಡ ಹಾಗೂ ಜಿಯೋ ಹಾಟ್ಸ್ಟಾರ್ನಲ್ಲಿ ವೀಕ್ಷಿಸಬಹುದು.
ಇದುವರೆಗೆ ಮನೆಯೊಳಗಿನ ಆಟ, ವ್ಯಕ್ತಿತ್ವ ಹಾಗೂ ವಿವಿಧ ಸಂದರ್ಭಗಳಲ್ಲಿ ಸ್ಪರ್ಧಿಯ ನಡೆ-ನುಡಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ ಈ ಎಕ್ಸಿಟ್ ಕೇವಲ ಮನೆಯ ಸದಸ್ಯರಿಗೆ ಮಾತ್ರವಲ್ಲದೆ,ತಮ್ಮ ನೆಚ್ಚಿನ ಸ್ಪರ್ಧಿಯನ್ನು ವಿನ್ನರ್ ಆಗಿ ನೋಡಲು ಬಯಸಿದ್ದ ವೀಕ್ಷಕರಿಗೂ ಶಾಕ್ ನೀಡಲಿದೆ.
ಬಿಗ್ಬಾಸ್ ಕನ್ನಡ ಸೀಸನ್ 7ರ ಸ್ಪರ್ಧಿಯಾಗಿದ್ದ ಕಿಶನ್, ಮತ್ತೊಮ್ಮೆ ದೊಡ್ಮನೆ ರಿಯಾಲಿಟಿ ಶೋಗೆ ಬರುತ್ತಿದ್ದಾರೆ. ಈ ಬಗ್ಗೆ ಇನ್ಸ್ಟಗ್ರಾಂನಲ್ಲಿ ಸೀಸನ್ 7ರ ವಿಡಿಯೋ ಝಲಕ್ ಹಂಚಿಕೊಂಡಿರುವ ಕಿಶನ್, ಮುಂದಿನ ಮೂರು ದಿನಗಳಲ್ಲಿ ಬಿಗ್ಬಾಸ್ ಜೀವನಕ್ಕೆ ಬರುತ್ತಿರೋದಾಗಿ ಹೇಳಿದ್ದಾರೆ. ಈ ಹಿಂದೆ ನಟ ಅರುಣ್ ಸಾಗರ್ ಎರಡು ಬಾರಿ ಬಿಗ್ಬಾಸ್ ಮನೆ ಸ್ಪರ್ಧಿಯಾಗಿದ್ದರು.
ಅರುಣ್ ಸಾಗರ್ ಅವರು ಬಿಗ್ಬಾಸ್ ಸೀಸನ್ ಮೊದಲ ಮತ್ತು ಒಂಬತ್ತರ ಸ್ಪರ್ಧಿಯಾಗಿದ್ದರು. ಇನ್ನು ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಸೀಸನ್ 4 ಮತ್ತು 13ರಲ್ಲಿಯೂ ಇದ್ದರು. ಎರಡು ಬಾರಿಯೂ ಅನಾರೋಗ್ಯದಿಂದ ಹೊರಗೆ ಬಂದಿದ್ದಾರೆ.
ಕಿಚ್ಚ ಸುದೀಪ್ ಅವರ ಘೋಷಣೆಯ ನಂತರ ಮನೆಯಲ್ಲಿ ಎಲಿಮಿನೇಷನ್ ಕುರಿತ ಕುತೂಹಲ ಹೆಚ್ಚಾಗಿದ್ದರೂ, ಅಂತಿಮವಾಗಿ ಹೊರಬರುವ ಸ್ಪರ್ಧಿ ಯಾರು ಎಂಬುದನ್ನು ಕೊನೆಯ ಕ್ಷಣದವರೆಗೂ ಊಹಿಸಲು ಸಾಧ್ಯವಾಗದಂತೆ ಪರಿಸ್ಥಿತಿ ಬದಲಾಗಿದೆ.







