ಬೆಂಗಳೂರು: ಚಿನ್ನದ ಬೆಲೆಯಲ್ಲಿಂದು ಮತ್ತೆ ಏರಿಕೆ ಕಂಡು ಬಂದಿದೆ. ಶನಿವಾರ ಬೆಂಗಳೂರಿನಲ್ಲಿ 22 ಕ್ಯಾರಟ್ನ 1 ಗ್ರಾಂ ಚಿನ್ನದ ದರದಲ್ಲಿ 60 ರೂ. ಏರಿಕೆಯಾಗಿ 13,880 ರೂಪಾಯಿ ಇದ್ದರೆ, 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ ದರದಲ್ಲಿ 71 ರೂ. ಹೆಚ್ಚಾಗಿ 15,142 ರೂಪಾಯಿ ಕಂಡು ಬಂದಿದೆ. ಇನ್ನು 22 ಕ್ಯಾರಟ್ನ 8 ಗ್ರಾಂ ಚಿನ್ನದ ಬೆಲೆ 1,11,040 ರೂಪಾಯಿ ಆಗಿದ್ದರೆ, 10 ಗ್ರಾಂಗೆ 1,38,800 ರೂಪಾಯಿ ಹಾಗೂ 100 ಗ್ರಾಂಗೆ 13,88,000 ರೂಪಾಯಿ ಪಾವತಿಸಬೇಕು. 24 ಕ್ಯಾರಟ್ 8 ಗ್ರಾಂ ಚಿನ್ನದ ಬೆಲೆ 1,21,136 ರೂಪಾಯಿ, 10 ಗ್ರಾಂಗೆ 1,51,420 ರೂಪಾಯಿ ಹಾಗೂ 100 ಗ್ರಾಂಗೆ 15,14,200 ರೂಪಾಯಿ ಇದೆ.
ಬೆಳ್ಳಿ ದರದಲ್ಲಿಯೂ ಕೊಂಚ ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ ಬೆಳ್ಳಿ ಗ್ರಾಂಗೆ 240 ರೂಪಾಯಿ ಇದೆ. ಇನ್ನು ಬೆಳ್ಳಿ 10 ಗ್ರಾಂಗೆ 2,400 ರೂಪಾಯಿ ಹಾಗೂ 1 ಕೆಜಿಗೆ 2,40,000 ರೂಪಾಯಿ ಪಾವತಿಸಬೇಕು.







