ಬಿಗ್ ಬಾಸ್ ಮನೆಯಲ್ಲಿ ಊಟದ ತಟ್ಟೆ ತೊಳೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಜಗದೀಶ್ ಹಾಗೂ ಗಗನ್ ನಡುವೆ ತೀವ್ರ ವಾಕ್ಸಮರ ನಡೆದಿದೆ.
ಊಟ ಮಾಡಿದ ನಂತರ ಎಂಜಲು ತಟ್ಟೆಗಳನ್ನು ಅಲ್ಲೇ ಬಿಟ್ಟು ಹೋಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಗಗನ್ ಪ್ರಶ್ನಿಸಿದಾಗ, ಜಗ್ಗಿ ತಮಗೂ ಅದಕ್ಕೂ ಸಂಬಂಧವಿಲ್ಲ ಎಂದು ವಾದಿಸಿದ್ದಾರೆ. ಆ ಬಳಿಕ ಇಬ್ಬರ ಮಧ್ಯೆ ವಾಕ್ಸಮರ ನಡೆದಿದೆ. ‘ಸಮಾಧಾನದಿಂದ ಮಾತನಾಡು. ತಮಾಷೆಯನ್ನು ತಮಾಷೆಯಾಗಿ ತೆಗೆದುಕೋ. ನನ್ನ ಹತ್ತಿರ ಎಗರಾಡಬೇಡ’ ಎಂದು ಗರಂ ಆಗಿದ್ದಾರೆ. ಇಬ್ಬರ ನಡುವಿನ ಮಾತಿನ ಚಕಮಕಿ ತೀವ್ರಗೊಳ್ಳುತ್ತಿದ್ದಂತೆ ಮನೆಯ ಇತರ ಸ್ಪರ್ಧಿಗಳು ಶಾಂತರಾಗುವಂತೆ ಮನವಿ ಮಾಡಿದ್ದಾರೆ. ಜಗ್ಗಿ ಇಷ್ಟು ದಿನ ಸೈಲೆಂಟ್ ಆಗಿದ್ದರು. ಈಗ ಅವರು ವೈಲಂಟ್ ಆಗಿದ್ದಾರೆ.
ಇದನ್ನೂ ಓದಿ : ಶಾರ್ದೂಲ್ ಕೊಟ್ಟ ಬ್ಯಾಟ್‌ನಲ್ಲಿ ರೋಹಿತ್ ಶತಕದ ಅಬ್ಬರ




