ಬೆಂಗಳೂರು: ನವರಾತ್ರಿಯ ಎರಡನೇ ದಿನವಾದ ಇಂದು ಆಭರಣ ಗ್ರಾಹಕರಿಗೆ ಗುಡ್ನ್ಯೂಸ್ ಸಿಕ್ಕಿದೆ. ಸೋಮವಾರ ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್ನ 1 ಗ್ರಾಂ ಚಿನ್ನದ ದರ 40 ರೂಪಾಯಿ ಇಳಿಕೆಯಾಗಿ 13,840 ರೂಪಾಯಿಗೆ ತಲುಪಿದೆ. ಇನ್ನು 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ 44 ರುಪಾಯಿ ಕಡಿಮೆಯಾಗಿ 15,098 ರೂಪಾಯಿ ಕಂಡು ಬಂದಿದೆ.
ಇನ್ನು 22 ಕ್ಯಾರಟ್ನ 8 ಗ್ರಾಂ ಚಿನ್ನದ ಬೆಲೆ 1,10,720 ರೂಪಾಯಿ ಆಗಿದ್ದರೆ, 10 ಗ್ರಾಂಗೆ 1,38,400 ರೂಪಾಯಿ ಹಾಗೂ 100 ಗ್ರಾಂಗೆ 13,84,000 ರೂಪಾಯಿ ಪಾವತಿಸಬೇಕು. 24 ಕ್ಯಾರಟ್ 8 ಗ್ರಾಂ ಚಿನ್ನದ ಬೆಲೆ 1,20,784 ರೂಪಾಯಿ, 10 ಗ್ರಾಂಗೆ 1,50,980 ರೂಪಾಯಿ ಹಾಗೂ 100 ಗ್ರಾಂಗೆ 15,09,800 ರೂಪಾಯಿ ಇದೆ.







