ಬೆಂಗಳೂರು : ಬೆಂಗಳೂರಿನ ಹೊರವರ್ತುಲ ರಸ್ತೆಯ ಮಾರತಹಳ್ಳಿ ಬಳಿಯಿದ್ದ ಸಾಯಿ ಆರ್ಕೇಡ್ ಪಾಸ್ಪೋರ್ಟ್ ಸೇವಾ ಕೇಂದ್ರವನ್ನು ಈಗ ವೈಟ್ಫೀಲ್ಡ್ನ ಹೊಸ ಸ್ಥಳಕ್ಕೆ ಶಾಶ್ವತವಾಗಿ ಸ್ಥಳಾಂತರಿಸಲಾಗಿದೆ. ಅಕ್ಟೋಬರ್ 5 ರಿಂದಲೇ ನೂತನ ಕೇಂದ್ರ ಕಾರ್ಯಾರಂಭ ಮಾಡಿದೆ ಎಂದು ಬೆಂಗಳೂರು ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ತಿಳಿಸಿದೆ.
ಇದೀಗ ವೈಟ್ಫೀಲ್ಡ್ನ ಇಪಿಐಪಿ ಝೋನ್ನಲ್ಲಿರುವ ಜಿಎಂ ಟೆಕ್ ಪಾರ್ಕ್ (ನಲ್ಲೂರಹಳ್ಳಿ ಮೆಟ್ರೋ ನಿಲ್ದಾಣದ ಹತ್ತಿರ, ರಸ್ತೆ ಸಂಖ್ಯೆ 3) ನೂತನ ಪಾಸ್ಪೋರ್ಟ್ ಸೇವಾ ಕೇಂದ್ರ ಕಾರ್ಯನಿರ್ವಹಿಸಲಿದೆ.
ಅ.5 ಅಥವಾ ಆ ನಂತರದ ದಿನಾಂಕಗಳಲ್ಲಿ ಮಾರತಹಳ್ಳಿಯ ಸಾಯಿ ಆರ್ಕೇಡ್ ಕೇಂದ್ರದಲ್ಲಿ ಪಾಸ್ಪೋರ್ಟ್ ನೇಮಕಾತಿ ಕಾಯ್ದಿರಿಸಿದ್ದ ಎಲ್ಲಾ ಅರ್ಜಿದಾರರು, ತಮ್ಮ ರಸೀದಿಯಲ್ಲಿ ನಮೂದಿಸಲಾಗಿರುವ ನಿಗದಿತ ಸಮಯಕ್ಕೆ ವೈಟ್ಫೀಲ್ಡ್ನ ಹೊಸ ಕಚೇರಿಗೆ ಭೇಟಿ ನೀಡಬೇಕಾಗಿದೆ.
ಹಳೆಯ ಕೇಂದ್ರದಲ್ಲಿದ್ದ ಸೌಕರ್ಯಗಳಿಗಿಂತ ಹೆಚ್ಚಿನ ಜಾಗ ಮತ್ತು ಅತ್ಯಾಧುನಿಕ ಮೂಲಸೌಕರ್ಯಗಳನ್ನು ಹೊಸ ಕೇಂದ್ರ ಹೊಂದಿದ್ದು, ಸಾರ್ವಜನಿಕರಿಗೆ ತ್ವರಿತ ಸೇವೆ ನೀಡಲು ಅನುಕೂಲವಾಗಲಿದೆ. ಮೆಟ್ರೋ ನಿಲ್ದಾಣದ ಹತ್ತಿರವೇ ಇರುವ ಕಾರಣ ಸಾರಿಗೆ ಸಂಪರ್ಕವೂ ಸುಲಭವಾಗಿದೆ. ಸಾರ್ವಜನಿಕರು ಯಾವುದೇ ಗೊಂದಲಕ್ಕೊಳಗಾಗದೆ ಹೊಸ ವಿಳಾಸಕ್ಕೆ ತೆರಳುವಂತೆ ಅಧಿಕಾರಿಗಳು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಅಥವಾ ಉಚಿತ ಸಹಾಯವಾಣಿ 1800-258-1800 ಅನ್ನು ಸಂಪರ್ಕಿಸಬಹುದು.
ಇದನ್ನೂ ಓದಿ : ಡಿ.4ರಿಂದ 13ರವರೆಗೆ `ಬೆಂಗಳೂರು ಜಾತ್ರೆ’: ಕೃಷ್ಣ ಬೈರೇಗೌಡ






