ಇತ್ತೀಚೆಗಷ್ಟೇ ರಿಲೀಸ್ ಆದ ಟಾಕ್ಸಿಕ್ ಚಿತ್ರದ ‘ತಬಾಹಿ’ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿ ಮಾಡಿದೆ
ಯಶ್ ಮತ್ತು ಕಿಯಾರಾ ನಡುವಿನ ಬೋಲ್ಡ್ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ. ಒಂದು ಕಡೆ ಕಿಯಾರಾ ಪಾತ್ರದ ಬಗ್ಗೆ ಆನ್ಲೈನ್ನಲ್ಲಿ ಕೆಲವರಿಂದ ತೀವ್ರ ಟೀಕೆಗಳು ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ಕಿಯಾರಾ ಪತಿ, ನಟ ಸಿದ್ಧಾರ್ಥ್ ತಮ್ಮ ಪತ್ನಿಯ ಬೆಂಬಲಕ್ಕೆ ದೃಢವಾಗಿ ನಿಂತಿದ್ದಾರೆ. ‘ಟಾಕ್ಸಿಕ್’ ಟ್ರೈಲರ್ ನೋಡಿ ಫಿದಾ ಆಗಿರುವ ಸಿದ್ಧಾರ್ಥ್, ವಿವಾದಗಳಿಗೆ ತಲೆಕೆಡಿಸಿಕೊಳ್ಳದೆ ಕಿಯಾರಾ ಅವರ ಶ್ರಮ ಮತ್ತು ಬದ್ಧತೆಯನ್ನು ಕೊಂಡಾಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಶೇಷ ಸಂದೇಶ ಹಂಚಿಕೊಂಡಿರುವ ಸಿದ್ಧಾರ್ಥ್, “ಕಿಯಾರಾ, ಈ ಸಿನಿಮಾಗಾಗಿ ನಿನ್ನ ಕಠಿಣ ಪರಿಶ್ರಮ ಮತ್ತು ಉತ್ಸಾಹ ದೊಡ್ಡ ಪರದೆಯ ಮೇಲೆ ಖಂಡಿತಾ ಕಾಣಿಸಲಿದೆ. ಇದು ನಿನ್ನ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಲಿದೆ ಕೀ..!” ಎಂದು ಪ್ರೀತಿಯಿಂದ ಬರೆದುಕೊಂಡಿದ್ದಾರೆ.
ಜೊತೆಗೆ, “ನಿರ್ದೇಶಕಿ ಗೀತು ಮೋಹನ್ ದಾಸ್, ಯಶ್ ಹಾಗೂ ಇಡೀ ತಂಡ ಸೃಷ್ಟಿಸಿರುವ ಮ್ಯಾಜಿಕ್ ನೋಡಲು ನಾನು ಕಾತರನಾಗಿದ್ದೇನೆ. #Toxic ತಂಡಕ್ಕೆ ನನ್ನ ಶುಭಾಶಯಗಳು. ಆಗಸ್ಟ್ 26ಕ್ಕಾಗಿ ಕಾಯುತ್ತಿದ್ದೇನೆ,” ಎಂದು ಹೇಳುವ ಮೂಲಕ ಚಿತ್ರತಂಡಕ್ಕೂ ಬೆಂಬಲ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ, ಆನ್ಲೈನ್ ಟೀಕಾಕಾರರಿಗೆ ಸಿದ್ಧಾರ್ಥ್ ತಮ್ಮದೇ ಶೈಲಿಯಲ್ಲಿ ಪಾಸಿಟಿವ್ ಆಗಿ ಉತ್ತರ ನೀಡಿದ್ದಾರೆ. ಕಿಯಾರಾ ಅವರ ಬೋಲ್ಡ್ ಅವತಾರ ಹಾಗೂ ಯಶ್ ಅವರ ರಗಡ್ ಲುಕ್ ಆಗಸ್ಟ್ 26 ರಂದು ಬೆಳ್ಳಿಪರದೆಯ ಮೇಲೆ ಯಾವ ಮಟ್ಟಿಗೆ ಧೂಳೆಬ್ಬಿಸಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕು






