ಅನ್ನದಾತರ ಭೂಮಿ ರಕ್ಷಣೆಗಾಗಿ JDS ಪಕ್ಷ ಮತ್ತೊಂದು ಐತಿಹಾಸಿಕ ಹೋರಾಟಕ್ಕೆ ಅಣಿಯಾಗಿದೆ. ವಿವಾದಿತ ‘ಬಿಡದಿ ಟೌನ್ಶಿಪ್’ ಯೋಜನೆಯನ್ನು ವಿರೋಧಿಸಿ, JDS ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಮೂರು ದಿನಗಳ ಬೃಹತ್ ಪಾದಯಾತ್ರೆಗೆ ಮುಹೂರ್ತ ನಿಗದಿಯಾಗಿದೆ.
“ಹೌದು, ಬಿಡದಿಯ ಬೈರಮಂಗಲದಿಂದ ಆರಂಭವಾಗಲಿರುವ ಈ ಪಾದಯಾತ್ರೆ, ನೇರವಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್ ತಲುಪಲಿದೆ. ಬರೋಬ್ಬರಿ 38 ಕಿಲೋಮೀಟರ್ಗಳಿಗೂ ಅಧಿಕ ದೂರ ಕ್ರಮಿಸಲಿರುವ ಈ ಐತಿಹಾಸಿಕ ನಡಿಗೆ ಆಗಸ್ಟ್ 9, 10 ಮತ್ತು 11 ರವರೆಗೆ ಸಾಗಲಿರುವ ಈ ಮೂರು ದಿನಗಳ ಪಾದಯಾತ್ರೆಯಲ್ಲಿ ಸಾವಿರಾರು ರೈತರು, ಪಕ್ಷದ ಕಾರ್ಯಕರ್ತರು ಕೈಜೋಡಿಸಲಿದ್ದಾರೆ.
“‘ರೈತರ ಫಲವತ್ತಾದ ಭೂಮಿಯನ್ನು ಕಿತ್ತು ರಿಯಲ್ ಎಸ್ಟೇಟ್ ಮಾಡಿ ಸಾವಿರಾರು ಕೋಟಿ ರೂ. ಲೂಟಿ ಮಾಡಲು ಹೊರಟಿರುವ ಈ ಜನವಿರೋಧಿ ಟೌನ್ಶಿಪ್ ಯೋಜನೆಯನ್ನು ಸರ್ಕಾರ ಕೂಡಲೇ ಕೈಬಿಡಬೇಕು’ ಎಂದು ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸಚಿವ ಹಾಗೂ ಪಕ್ಷದ ಹಿರಿಯ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಹೋರಾಟ, ಸರ್ಕಾರದ ನಿದ್ದೆಗೆಡಿಸುವುದು ಖಚಿತ ಎನ್ನಲಾಗುತ್ತಿದೆ.”
“ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸಮಾರೋಪಗೊಳ್ಳಲಿರುವ ಈ ಪಾದಯಾತ್ರೆ ಸರ್ಕಾರದ ಮೇಲೆ ಎಂಥಾ ಪ್ರಭಾವ ಬೀಳಲಿದೆ ಮತ್ತು ರೈತರ ಆಕ್ರೋಶಕ್ಕೆ ಸರ್ಕಾರ ಹೇಗೆ ಸ್ಪಂದಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.







