ಲಕ್ನೋ : ನೋಯ್ಡಾದ ನಂಗ್ಲಾ ಶ್ರೀಗೋಪಾಲ್ ಗ್ರಾಮದಲ್ಲಿ ಮೂರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಮೃತರನ್ನು ಮಹೇಶ್ (37), ಪತ್ನಿ ಲಲಿತಾ (35) ಮತ್ತು ಮಕ್ಕಳಾದ ಲಡ್ಡು (11), ಮಿಶ್ತಿ (7) ಮತ್ತು ಸಾಕ್ಷತ್ (3) ಎಂದು ಗುರುತಿಸಲಾಗಿದೆ.
ಕುಟುಂಬದ ಸದಸ್ಯರು ಕೊನೆಯದಾಗಿ ನೋಡಲ್ಸ್ ಸೇವಿಸಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆಹಾರದ ಮೂಲಕ ವಿಷ ದೇಹ ಸೇರಿರುವ ಶಂಕೆ ವ್ಯಕ್ತವಾಗಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ.
ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಾವಿಗೆ ನಿಖರವಾದ ಕಾರಣ ತಿಳಿದುಬರಲಿದೆ. ಘಟನೆ ಕುರಿತು ಉತ್ತರ ಪ್ರದೇಶದ ರಬೂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.
ಇದನ್ನೂ ಓದಿ : ಮ್ಯಾಪ್ ಎಡವಟ್ಟು : ಘಾಟ್ನಲ್ಲಿ ಹಾದಿ ತಪ್ಪಿ ದಟ್ಟ ಕಾಡಿಗೆ ಸಿಲುಕಿದ ಟೆಕ್ಕಿ!







